ನ ಗುರೋರಧಿಕಂ ನ ಗುರೋರಧಿಕಂ ನ ಗುರೋರಧಿಕಂ'
ಎಂಬ ಶ್ರುತಿಯುಂಟಾಗಿ,
ಹರ ಮುನಿದರೆ ಗುರು ಕಾಯ್ವ,
ಗುರುಮುನಿದರೆ ಹರ ಕಾಯನೆಂಬ ವಾಕ್ಯ ದಿಟ.
ಅದೆಂತೆಂದೊಡೆ: ಪರಶಿವನಾಣತಿವಿಡಿದೈತಂದು
ತನುಸಂಗ ಮರವೆಯಾವರಿಸಿದಂದು,
ತನ್ನತ್ತ ತಾನೊಯ್ವ ಸತ್ವ ತನಗಿಲ್ಲ.
ಮತ್ತೆ ಸುಜ್ಞಾನಗುರುವಾಗಿ ಬಂದೆನ್ನೆಚ್ಚರಿಸಿ,
ಕ್ರಿಯಾಘನಗುರುವಾಗಿ ಬಂದೆನ್ನ ಬೋಧಿಸಿ
ಅತ್ತಲಾ ಪರಶಿವನ ತಂದೆನ್ನ
ಕರ ಮನ ಭಾವದಲ್ಲಿ ತೋರಿ ಕಾಣಿಸಿದ
ನಿರಂಜನ ಚನ್ನಬಸವಲಿಂಗ ತಾನೆಂಬ ಭಾವವನು
Art
Manuscript
Music
Courtesy:
Transliteration
Na gurōradhikaṁ na gurōradhikaṁ na gurōradhikaṁ'
emba śrutiyuṇṭāgi,
hara munidare guru kāyva,
gurumunidare hara kāyanemba vākya diṭa.
Adentendoḍe: Paraśivanāṇativiḍidaitandu
tanusaṅga maraveyāvarisidandu,
tannatta tānoyva satva tanagilla.
Matte sujñānaguruvāgi bandenneccarisi,
kriyāghanaguruvāgi bandenna bōdhisi
attalā paraśivana tandenna
kara mana bhāvadalli tōri kāṇisida
niran̄jana cannabasavaliṅga tānemba bhāvavanu