ಅಕಳಂಕ ಮಹಿಮಾಚಾರ್ಯನ ನಿರ್ಮಲ ಕಟಾಕ್ಷಮಣಿಯನು
ಅರಿದರಿದು ಅವಧರಿಸಿದ ಅಪ್ರತಿಮ ಶರಣಂಗೆ
ಅರಿಷಡ್ವರ್ಗಂಗಳು ಮುಟ್ಟಲಮ್ಮವು,
ಷಡೂರ್ಮಿಯಂಗಳು ಸ್ಪರ್ಶಿಸಲಮ್ಮವು,
ಮರಳಿ ಮುಂದುಗಾಣದಿರ್ದವು ಗುಣಾಳಿ,
ಕರ್ಮತ್ರಯಂಗಳಳಿದು ನಿರ್ಮಳ ನಿಲವಾಗಿರ್ದವು
ನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
Art
Manuscript
Music
Courtesy:
Transliteration
Akaḷaṅka mahimācāryana nirmala kaṭākṣamaṇiyanu
aridaridu avadharisida apratima śaraṇaṅge
ariṣaḍvargaṅgaḷu muṭṭalam'mavu,
ṣaḍūrmiyaṅgaḷu sparśisalam'mavu,
maraḷi mundugāṇadirdavu guṇāḷi,
karmatrayaṅgaḷaḷidu nirmaḷa nilavāgirdavu
niran̄jana cannabasavaliṅga sākṣiyāgi.