Index   ವಚನ - 80    Search  
 
ಅನಾದಿ ಅಸಮಾಕ್ಷಮಾಲೆಯನುಳಿದು ಚಿನುಮಯಲಿಂಗವ ಪೂಜಿಸಿದರೆ ನಿಜಪದವಸಾಧ್ಯವಯ್ಯಾ. ಚಂದ್ರಮೌಳಿಯ ನಯನಜಲಬಿಂದೋದಯ ಮಣಿಮಾಲೆಯನುಳಿದು ಪಲವು ಮಣಿಮಾಲೆಯಿಂದೆ ಜಪ ಧ್ಯಾನಾನುಷ್ಠಾನವನೆಸಗಿದರೆ ಶಿವಪದವು ಅಸಾಧ್ಯವಯ್ಯಾ. ಪರಶಿವನೂರ್ಧ್ವನಿರೀಕ್ಷಣಾನಂದೋದಕ ಮಾಲೆಯನುಳಿದು ಪರಿಪರಿಯಾಭರಣವ ಧರಿಸಿ ಗುರಾಚಾರ ಭಕ್ತಿದಾಸೋಹವ ನಲಿನಲಿದು ಮಾಡಿದರೆ ನಿರಂಜನ ಚನ್ನಬಸವಲಿಂಗಕ್ಕೆ ಪರಿಣಾಮವಲ್ಲ ಕಾಣಾ.