ಮೂರ್ತಿಬ್ರಹ್ಮ, ಪಿಂಡಬ್ರಹ್ಮ, ಕಲಾಬ್ರಹ್ಮ, ಆನಂದಬ್ರಹ್ಮ,
ವಿಜ್ಞಾನಬ್ರಹ್ಮ, ಪರಬ್ರಹ್ಮಸ್ವರೂಪವಾದ ಷಟ್ಪ್ರಣಮವನು
ಅಂಗ, ಆತ್ಮ, ಪ್ರಾಣ, ಕರಣ, ವಿಷಯತೃಪ್ತಿಸಂಬಂಧವೆಂದು
ಎನ್ನ ಮನದ ಕೊನೆಯಲ್ಲಿ ಮಡುಗಿ
ಮರೆಯದವಧರಿಸೆಂದುಪದೇಶವನಿತ್ತ
ಮಹಾಘನ ಗಂಭೀರ ಸದ್ಗುರುನಾಥನ ಪ್ರಸಾದವನು
ಹೆರೆಹಿಂಗದವಿರಳಕ್ರಿಯೆಯಿಂದೆ ಅವಧರಿಸಿ
ಮುಖದಿಂ ಸೇವಿಸಿ, ಬಾಹ್ಯಾಂತಸುಖಿಯಾಗಿರ್ದೆನು
ನಿರಂಜನ ಚನ್ನಬಸವಲಿಂಗ ಸನ್ನಿಹಿತನಾಗಿ.
Art
Manuscript
Music
Courtesy:
Transliteration
Mūrtibrahma, piṇḍabrahma, kalābrahma, ānandabrahma,
vijñānabrahma, parabrahmasvarūpavāda ṣaṭpraṇamavanu
aṅga, ātma, prāṇa, karaṇa, viṣayatr̥ptisambandhavendu
enna manada koneyalli maḍugi
mareyadavadharisendupadēśavanitta
mahāghana gambhīra sadgurunāthana prasādavanu
herehiṅgadaviraḷakriyeyinde avadharisi
mukhadiṁ sēvisi, bāhyāntasukhiyāgirdenu
niran̄jana cannabasavaliṅga sannihitanāgi.