Index   ವಚನ - 95    Search  
 
ಪಂಚಾಕ್ಷರವೇ ಪರಮಾಮೃತವೆಂದು ಕರ್ಣದ್ವಾರದಲ್ಲಿ ಕೊಂಡು ಜಿಹ್ವೆ ಮನಕ್ಕೆ ಸಂಬಂಧವಾಯಿತ್ತೆಂದು ಹೇಳಿಕೊಂಡ ಬಳಿಕ ಹುಸಿ ನುಡಿ ದುರ್ವಾಕ್ಯದಿಂದೆ ಮನ ಹೆಚ್ಚಿ ನಡೆದರೆ ಆತನ ನಡೆಗೆ ವೈತರಣಿಯೇ ಗತಿ. ಆತನ ನುಡಿ ಅಧೋಶಬ್ದ, ಆತನ ಮನ ಕಾಡ ಕಿರಾತ. ಇಂತಪ್ಪ ಭವಿಗಳ ಹೃದಯಕ್ಕೂ ಗುರುನಿರಂಜನ ಚನ್ನಬಸಲಿಂಗಕ್ಕೂ ಇರುಳು ಹಗಲು.