Index   ವಚನ - 100    Search  
 
ಪಂಚಾಕ್ಷರಿಯ ಧ್ಯಾನದಿಂದೆ ಪಂಚಭೂತಪ್ರಕೃತಿಯನರಿಯದಿರ್ದೆ. ಪಂಚಾಕ್ಷರಿಯ ನೆನಹಿನಿಂದೆ ಪಂಚೇಂದ್ರಿಯಪ್ರಕೃತಿಯನರಿಯದಿರ್ದೆ. ಪಂಚಾಕ್ಷರಿಯ ಧ್ಯಾನದಿಂದೆ ಪಂಚವಿಷಯಪ್ರಕೃತಿಯನರಿಯದಿರ್ದೆ. ಪಂಚಾಕ್ಷರಿಯ ಸ್ಮರಣೆಯಿಂದೆ ಪಂಚಕರಣಪ್ರಕೃತಿಯನರಿಯದಿರ್ದೆ. ಪಂಚಾಕ್ಷರಿಯ ಮನನದಿಂದೆ ಪಂಚಪ್ರಾಣವಾಯುವಿನ ಪ್ರಕೃತಿಯನರಿಯದಿರ್ದೆ. ಗುರುನಿರಂಜನ ಚನ್ನಬಸವಲಿಂಗದಲ್ಲಿ ಪಂಚಾಕ್ಷರಿಯ ನಿರ್ಧಾರದಿಂದೆ ಪರಮಸುಖಿಯಾಗಿರ್ದೆನು.