Index   ವಚನ - 123    Search  
 
ಸಕಲಾನಂದಪರಬ್ರಹ್ಮವೆ ಕರ್ತನೆನಗೆ ; ಸತ್ಕ್ರಿಯಾ ಸನ್ನಿಹಿತ ಭಕ್ತನೇ ಭೃತ್ಯ ನಿನಗೆ. ನಿಃಕಲಾನಂದಚಿದ್ಬ್ರಹ್ಮವೆ ಒಡೆಯನೆನಗೆ ; ನಿಃಕ್ರಿಯಾ ಸನ್ನಿಹಿತ ಚಿದ್ಭಕ್ತನೇ ಬಂಟ ನಿನಗೆ. ಸಮರಸಾನಂದನಿಜಬ್ರಹ್ಮವೇ ಆಳ್ದನೆನಗೆ ; ಅವಿರಳ ಕ್ರಿಯಾ ಸನ್ನಿಹಿತ ಅಭಿನ್ನಭಕ್ತನೇ ಆಳು ನಿನಗೆ, ಗುರುನಿರಂಜನ ಚನ್ನಬಸವಲಿಂಗ ಅಂಗಪ್ರಾಣ.