Index   ವಚನ - 125    Search  
 
ತಮ್ಮನ ಮದುವೆಯಾದೆ ತಾಯಿ ತಂದೆಯನೊಲಿಸಿ, ಎನ್ನ ಶೃಂಗಾರದ ಸೊಬಗ ನೋಡಿ ನೋಡಿ ನೆರೆಯಬೇಕೆಂದು, ನೋಟದ ಸಂಚದೊಳಗೆ ಆಟ ಹಣ್ಣಿ ನಿಂದಿತ್ತು, ಆಟದ ಭರದಲ್ಲಿ ನೋಟಕರ ಸಂತವಿಡದಿರ್ದಡೆ, ಅಂತಕನ ಕುಳವಯ್ಯಾ, ನಾನಂತಲ್ಲ ನಿನ್ನವರೆನ್ನಪ್ರಾಣ ಗುರುನಿರಂಜನ ಚನ್ನಬಸವಲಿಂಗಾ.