Index   ವಚನ - 138    Search  
 
ಅಚ್ಚ ಗುರುಲಿಂಗಜಂಗಮವನು ಆರತಿ ಎತ್ತಿ ವಂದಿಸಿ, ಆರು ಆರಾರ ತೆರದಿಂದರ್ಚಿಸಿ, ಆಯತಪ್ರಸಾದದೊಳವಧಾನಿಭಕ್ತ ನಾನು. ನಿನ್ನಾಯತವ ಕಳೆದು ಕರ್ಮವನುಂಬುವನಲ್ಲ, ನಿನ್ನ ಸ್ವಾಯತವ ಕಳೆದು ಕಲ್ಪನೆಯೊಳೊಂದುವನಲ್ಲ, ನಿನ್ನ ಸನ್ನಿಹಿತವ ಕಳೆದು ಕತ್ತಲೆಯಗೂಡಿ ಹೋಗುವನಲ್ಲ. ನೋಡಿ ಕೂಡು ಗುರುನಿರಂಜನ ಚನ್ನಬಸವಲಿಂಗನ.