Index   ವಚನ - 140    Search  
 
ಆಡುವೆನಯ್ಯಾ ಎನ್ನೊಡೆಯನ ಶರಗಹಿಡಿದು ಆರಾರ ಸಂಗತಿಯಿಂದೆ. ಕೂಡುವೆನಯ್ಯಾ ಎನ್ನಯ್ಯನ ಬಳಿವಿಡಿದು ಆರಾರ ಸಖತನದಿಂದೆ. ಕೊಂಬುವೆನಯ್ಯಾ ಎನ್ನ ತಂದೆಯ ಮುಂದಿಟ್ಟು ಆರಾರ ರತಿಯಿಂದೆ. ಆನಂದಿಸುವೆನಯ್ಯಾ ಎನ್ನ ಕರ್ತುಗಳನರಿದು ಆರಾರ ಪ್ರೀತಿಯಿಂದೆ. ಎನ್ನಾವಾವ ಬಗೆಯಲ್ಲಿ ನಂಟುತನಕ್ಕೆ ಕಂಟಕ ಬಂದರೆ ಗಂಟ ಬಿಡದಿರು ಅಂಟಿಕೊಂಬೆ ಗುರುನಿರಂಜನ ಚನ್ನಬಸವಲಿಂಗಾ.