Index   ವಚನ - 158    Search  
 
ಸುಜ್ಞಾನಕ್ರಿಯಾಘನಗುರುಮೂರ್ತಿ ಒಲಿದು ಪರಶಿವಲಿಂಗವ ಕೊಟ್ಟ ಬಳಿಕ, ಆ ಲಿಂಗದಲ್ಲಿಯೇ ಬೆಳಗನರಿದು ಕಂಡು ಸುಖಿಸಬೇಕಲ್ಲದೆ, ಬೇರೆ ಬೆಳಗ ಕಂಡು ಸುಖಿಸಬೇಕೆಂದು ಗುರು-ಲಿಂಗ-ಜಂಗಮ-ಪಾದೋದಕ-ಪ್ರಸಾದವನುಳಿದು ಕಂಡಂತೆ ನಡೆವ ತಂಡ ಭಾವಕರಿಗೆ ಗುರುನಿರಂಜನ ಚನ್ನಬಸವಲಿಂಗದ ಬೆಳಗು ಎಂದಿಗೂ ಕಾಣಬಾರದು.