Index   ವಚನ - 174    Search  
 
ಗಂಡನ ತಾಳಿಯ ಒರೆದು ನೋಡಿದರೆ ಮೂರು ಬಣ್ಣದೊಳಗೆ ಅನಂತ ಬಣ್ಣಗಳಾಗಿ ಒಪ್ಪುತಿರ್ದವು ನೋಡಾ! ನಮ್ಮಾತನ ಒಲುಮೆಗೆ ಬಣ್ಣದ ಸಾರವ ಸುಖಿಸಬಂದ ಅಣ್ಣಗಳ ಕಣ್ಮನ ಭಾವಕ್ಕೆ ಕಾರ್ಯವಾದರೆ ಕಾರಣನಾಗಿರ್ದ ನಮ್ಮ ಗುರುನಿರಂಜನ ಚನ್ನಬಸವಲಿಂಗ.