ವಚನ - 1247     
 
ತೋರಬಾರದ ಠಾವಿನಲ್ಲಿ ಒಂದು ಹೊಂಬಣ್ಣ ಸುಳಿಯಿತ್ತು. `ಸ್ಯೋಹಂ ಸ್ಯೋಹಂ' ಎಂದುದು ಬ್ರಹ್ಮವು. ಮುಟ್ಟಿಯೂ ಮುಟ್ಟದ ಬ್ರಹ್ಮವ ನೆಟ್ಟನೆ ಮುಂದರಿದೆ. ಕಟ್ಟಳೆಯಿಲ್ಲದ ಇರವು ಗುಹೇಶ್ವರಾ ನಿಮ್ಮ ನಿಲವು.