ಅಂಗವಿಲ್ಲದೆ ಸಂಗಸನ್ನಿಹಿತ ಜಂಗಮವೆನ್ನಲ್ಲಿಗೈತಂದರೆ,
ಮಂಗಳಾರತಿಯನೆತ್ತಿ,
ಎನ್ನ ಸಂಗ ಎನ್ನ ಅಂಗ ಮನ ಭಾವಂಗಳೊಪ್ಪಿ ಕರೆತರುವೆ ಕೇಳಿರವ್ವಾ!
ಬಂದ ಬರವ ಕಂಡು ಕರಣತ್ರಯ ಕೈಗೂಡಿ ಮಾಡುವೆ
ನೀವು ಮೆಚ್ಚುವಂತೆ ಕೇಳಿರವ್ವ ಕೆಳದಿಯರೆಲ್ಲ.
ಮತ್ತೆ ನಿಮ್ಮ ನಿಲವೆನ್ನವೊಳಹೊರಗೆ ಸಯವಾದರೆ
ಗುರುನಿರಂಜನ ಚನ್ನಬಸವಲಿಂಗದೊಲುಮೆ ನಿತ್ಯ ಕಾಣಿರವ್ವಾ.