Index   ವಚನ - 192    Search  
 
ನಡೆನೋಟ ಚೈತನ್ಯದೊಡವೆರೆದು ಒಡೆಯನ ಪಿಡಿದು ಸಡಗರಮುಖನಾದಲ್ಲಿ ಮೊದಲು-ಮಧ್ಯ-ತುದಿ ಭಜನೆಯೆಂಬ ಕಣ್ಮನದ ಕಳವಳನಳಿದುಳಿದ ನಿಜಾನಂದ ನೋಡಾ! ಮಾಡಿದರೆ ಮಾಟ ಶೂನ್ಯ, ನೋಡಿದರೆ ನೋಟ ಶೂನ್ಯ, ನೀಡಿದರೆ ನಿಲವು ಶೂನ್ಯ, ಮಾಟತ್ರಯದಾಟಭರಿತ, ಗುರುನಿರಂಜನ ಚನ್ನಬಸವಲಿಂಗದಂಗ ತಾನೆಯಾಗಿ.