ಅಂಗವಿಲ್ಲದ ಭಕ್ತನ ಶೃಂಗಾರವ ನೋಡಾ!
ಮನವಿಲ್ಲದ ಭಕ್ತನ ಮಚ್ಚು ನೋಡಾ!
ಪ್ರಾಣವಿಲ್ಲದ ಭಕ್ತನ ಘನವ ನೋಡಾ!
ಭಾವವಿಲ್ಲದ ಭಕ್ತನ ಸುವಿಚಾರವ ನೋಡಾ!
ಪರಿಜ್ಞಾನವಿಲ್ಲದ ಭಕ್ತನ ಇರವ ನೋಡಾ!
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಸಮರಸವ ನೋಡಾ!
Art
Manuscript
Music
Courtesy:
Transliteration
Aṅgavillada bhaktana śr̥ṅgārava nōḍā!
Manavillada bhaktana maccu nōḍā!
Prāṇavillada bhaktana ghanava nōḍā!
Bhāvavillada bhaktana suvicārava nōḍā!
Parijñānavillada bhaktana irava nōḍā!
Guruniran̄jana cannabasavaliṅgadalli
samarasava nōḍā!