Index   ವಚನ - 205    Search  
 
ದಶಪಂಚಮಾಯಾಪಟಲನುರುಹಿ, ಪಂಚಾಚಾರವೇ ಪ್ರಾಣವಾಗಿ, ಕಾಯದ ಕರ್ಮಕತ್ತಲೆಯ ಪರಿಹರಿಸಿ, ಅಷ್ಟಾವರಣವೇ ಅಂಗವಾಗಿ, ಗುರುಭಕ್ತಿ, ಲಿಂಗಪೂಜೆ ಜಂಗಮದಾಸೋಹವೆ ಮಹಾನುಭಾವವಾದ ಘನಮಹಿಮನೆ, ಮಹಾಮಹೇಶ್ವರ ಕಾಣಾ ಗುರುನಿರಂಜನ ಚನ್ನಬಸವಲಿಂಗ.