Index   ವಚನ - 209    Search  
 
ಆಕಾರದನುವಿಡಿದು ಸಾಕಾರಸನ್ನಿಹಿತನಾಗಿ, ಆಕಾರವ ಮರೆದನುಭವಿಸಿದರೆ ಸಾಕಾರದ್ರೋಹ ಸವೆಯದು. ನಿರಾಕಾರದನುವಿಡಿದು ನಿರಾವಯಸನ್ನಿಹಿತನಾಗಿ, ನಿರಾಕಾರವ ಮರೆದು ಅನುಭವಿಸಿದರೆ ನಿರಾವಯದ್ರೋಹ ಪರಿಯದು. ಬಯಲದನುವಿಡಿದು ನಿರ್ವಯಲಸನ್ನಿಹಿತನಾಗಿ, ಬಯಲ ಮರೆದು ಅನುಭವಿಸಿದರೆ ನಿರ್ವಯಲದ್ರೋಹ ಸರಿಯದು. ಹೀಗೆಂಬ ಶ್ರುತಿಯ ಗುರುಸ್ವಾನುಭಾವದಿಂದರಿದು ಮರೆಯದೆ ಮಾಟತ್ರಯದಲ್ಲಿ ನೀಟವಾಗಿರ್ದೆನು ನಿಮ್ಮಾಣೆ ಗುರುನಿರಂಜನ ಚನ್ನಬಸವಲಿಂಗಾ.