Index   ವಚನ - 217    Search  
 
ಅನಾದಿಸಂಸಿದ್ಧ ನಿರಂಜನ ಪರಶಿವಲಿಂಗಸನ್ನಿಹಿತವಾದ ವೀರಮಾಹೇಶ್ವರರು, ಗೌರವಬುದ್ಧಿ ಲಿಂಗಲೀಯಾದಿ ಷಡ್ವ್ರತಾಚಾರವೇ ಅಂಗವಾಗಿ, ಅಕ್ರೋಧ ಸತ್ಯವಚನಾದಿ ಷಡ್ವಿಧ ಶೀಲಸಂಪನ್ನತೆಯೇ ಪ್ರಾಣವಾದ ಕಾರಣ, ಹಿಡಿದು ಬಿಡೆನೆಂಬುದೊಂದು ಛಲ. ಬಿಟ್ಟ ರಚ್ಚೆಯ ಬಳಸೆನೆಂಬುದೊಂದು ಛಲ. ಹಿಡಿದು ತಪ್ಪಿದವರ ಕೆಡಹಿಬಿಡುವೆನೆಂಬುದೊಂದು ಛಲ. ಬಿಟ್ಟುದ ಹಿಡಿದು ಮೋಹಿಸುವವರ ಕುಟ್ಟಿ ಕಳೆದುಹಾಕುವೆನೆಂಬುದೊಂದು ಛಲ. ಭಿನ್ನ ದೈವವ ಪೂಜಿಸುವವರ ಕುನ್ನಿಗಳ ಸರಿಗಾಂಬುದೊಂದು ಛಲ. ಅನ್ಯರುಗಳ ಬೇಡದಿರುವುದೊಂದು ಛಲ. ಇಂತು ಷಡ್ವಿಧಛಲದ ಮೇಲೆ ಗುರುನಿರಂಜನ ಚನ್ನಬಸವಲಿಂಗವಿಲ್ಲದಂಗಿಗಳೊಡನೆ ಮಾತನಾಡಬಾರದೆಂಬುದೊಂದು ಘನ ಛಲವು.