ಒಡದು ಮೂಡಿ ನಿಗುರಿ ನೋಡಿ
ಕಡಿದು ಬಿಸಾಟಿದಲ್ಲಿ ಬೆಂಕಿ ಹುಟ್ಟಿತ್ತು ನೋಡಾ!
ಬೆಂಕಿಪುರುಷನ ಸಂಗದಿಂದೆ ಮಂಗಲಮಹಿಮನ ಕಂಡು
ಅಂಗಳದಲ್ಲಿ ಕೂಡಿದರೆ,
ಮನೆ ಸುಟ್ಟು ಹಾವೆದ್ದು ಕಿಚ್ಚ ಹಿಡಿದು
ಮೇಲು ಮಂಟಪಕ್ಕೆ ನೆಗೆಯಲು,
ಉರಿಯ ಬೆಳಗಿನೊಳಗಿರ್ದ ಗುರುನಿರಂಜನ
ಚನ್ನಬಸವಲಿಂಗದಂಗವ
ಬೆರೆದು ಚರಿಸುವ ಲೀಲೆಯ ನೋಡಾ.
Art
Manuscript
Music
Courtesy:
Transliteration
Oḍadu mūḍi niguri nōḍi
kaḍidu bisāṭidalli beṅki huṭṭittu nōḍā!
Beṅkipuruṣana saṅgadinde maṅgalamahimana kaṇḍu
aṅgaḷadalli kūḍidare,
mane suṭṭu hāveddu kicca hiḍidu
mēlu maṇṭapakke negeyalu,
uriya beḷaginoḷagirda guruniran̄jana
cannabasavaliṅgadaṅgava
beredu carisuva līleya nōḍā.