Index   ವಚನ - 243    Search  
 
ಇಳೆಯಮೇಲೆ ಎಲುವಾಲದ ಮರನಿರ್ದುಫಲವೇನು? ಸಾರಾಯಹೀನ ಕಾಯದಮೇಲೆ ಲಾಂಛನವಿರ್ದು ಫಲವೇನು? ಭಕ್ತಿ ಜ್ಞಾನ ವೈರಾಗ್ಯಹೀನ ಭಾರ ಭಾರ ಭವಭಾರ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.