Index   ವಚನ - 245    Search  
 
ಪೂರ್ವದೈವರ ಕಾಲತೊಳೆಸಿ ನಡೆಸಬೇಕು. ಉತ್ತರದೈವರ ಕಾಲತೊಳೆಸಿ ನಡೆಸಬೇಕು. ಪಶ್ಚಿಮದೈವರ ಬಾಯಿತೊಳೆಸಿ ನಡೆಸಬೇಕು. ಮೆರೆವ ಮೂವರ ಸಿರಿಯತೊಳೆಸಿ, ಇಂತಿವರಕೂಡಿ ಗುರುನಿರಂಜನ ಚನ್ನಬಸವಲಿಂಗದತ್ತ ಅಭಿಮುಖವಾಗಿ ನಡೆಯಬೇಕು.