ಕೋಣನ ಹತ್ತಿ ನಡೆವ ಕರಿಯಸತ್ತಿಗೆಯ
ಹಿರಿಯರು ನೀವು ಕೇಳಿರೊ,
ನಿಮ್ಮ ದಾರಿ ಡೊಂಕು ಬಹಳ, ಹೊತ್ತುಳ್ಳಲ್ಲಿ
ಹೋಗುವ ಪರಿಯಿನ್ನೆಂತೊ?
ಕೋಣನ ಉರುಹಿ, ಕೊಂಬು ಕಿತ್ತೊಗೆದು,
ಸತ್ತಿಗೆಯ ಸುಟ್ಟು,
ಹಾರುವನ ತಲೆಯ ಬೋಳಿಸಿ,
ಊರ ದೇವತೆಯ ಕಡಿದು ನಿಂತುನೋಡಲು
ನೆಲ ಒಣಗಿ, ಬಿಳಿಯ ದಾರಿ ಕಾಣಬಹುದು.
ಮೆಲ್ಲಮೆಲ್ಲನೆ ದಾರಿಯ ಬಿಡದೆ ನಡೆದರೆ
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಎರಡನೆಯವತಾರವೊಪ್ಪಿತ್ತು.