ಕಡಗೊಂಡ ಧನದಿಂದೆ ಗಳಿಸಿಕೊಡಲೊಲ್ಲದೆ
ನೋಡಿ ನೋಡಿ ಮಿಡುಕುವ ತುಡುಗುಣಿಯಂತೆ,
ಎನ್ನೊಡೆಯರು ಅಡಿಯಿಟ್ಟು ಬರಲು ಗಡಬಡಗೊಂಡು
ಮನೆ ಮಡದಿ ಮಕ್ಕಳ ಮೋಹ ತಲೆಗೇರಿ,
ಸಲುಗೆಯನಿದಿರಿಟ್ಟು ಸರಿದುಕೊಂಡಿರುವ
ಒಳಗಳ್ಳಗೆಂತು ಭಕ್ತಿಯಪ್ಪುದಯ್ಯಾ!
ನಿಮ್ಮಡಿಯೊಳು ಬಿದ್ದ ಆ ಜಡ ಭಕ್ತಿಗನುವಾಗಿ
ಬಾ ಗುರುನಿರಂಜನ ಚನ್ನಬಸವಲಿಂಗಾ.