Index   ವಚನ - 264    Search  
 
ಧರೆ ಗಗನದಲ್ಲಿರ್ದು ಬಯಲ ಕುರುಹರಿಯದೆ ಬಡಿದಾಡಿ ಮಡಿದು ಹೋದರು ಅನಂತ ಹಿರಿಯರು. ಇದ ಕಂಡು ಮರಳಿದರೆ ಮನದೊಡೆಯ ನೀ ಸಾಕ್ಷಿ. ಮಧ್ಯಮಂಟಪದೊಳಗಿಪ್ಪ ಶುದ್ಧಧನವೆಲ್ಲ ಚಿದ್ರೂಪಗಲ್ಲದೆ ಮತ್ತೊಂದನರಿಯದ ಭಾವ ಗುರುನಿರಂಜನ ಚನ್ನಬಸವಲಿಂಗ ನಿಮ್ಮಾಣೆ.