Index   ವಚನ - 281    Search  
 
ಪ್ರಸಾದಮುಖದಿಂದುದಯವಾದ ಮಹೇಶ್ವರನಂಗದಲ್ಲಿ ಪ್ರಸಾದಪ್ರಕಾಶವೇ ತೋರುತಿಹುದು. ತನ್ನ ಪ್ರಾಣವಾದ ಶಿವಜಂಗಮಾರ್ಯಂಗೆ ಉಪಚಾರ ಅರ್ಪಿತದ ಪರಿಯನೊಬ್ಬರು ಹೇಳುವರಿಲ್ಲ ನೋಡಾ, ಕೇಳುವರಿಲ್ಲ ನೋಡಾ, ಕಾಣುವರಿಲ್ಲ ನೋಡಾ. ಚತುರಂಗ ಚತುರಂಗ ಕೂಡಿ ಮಾಡುವಲ್ಲಿ ಸದನದೊಳಗಿರ್ದ ಸಕಳರು ನಿಮ್ಮವರಯ್ಯಾ. ನೋಟ, ಮಾಟ, ಕೂಟಕ್ಕೆ ನೀವೆಯಯ್ಯಾ ಗುರುನಿರಂಜನ ಚನ್ನಬಸವಲಿಂಗ.