Index   ವಚನ - 288    Search  
 
ಕೆಸರೊಳಗೆ ನಿಂದು ಕೊಡವ ಹೊತ್ತು ಕಂಡಕಂಡವರ ಕಾಲಿಗೆ ಕೈಗೊಟ್ಟು ಶರಣೆಂಬ ರಂಡೆಯ ಬಾಯಿ ನೋಡಾ ಹೇಸಿಕೆ, ಮೂಗು ನೋಡಾ ದುರ್ವಾಸನೆ, ಕಣ್ಣು ನೋಡಾ ಗಂಜಲ, ಕಿವಿಯು ನೋಡಾ ಕಿಲ್ಬಿಷ, ಸರ್ವಾಂಗವೆಲ್ಲ ಮಸಿಯು. ಕತ್ತಲಹೊತ್ತು ಕಾರ್ಯನೀತಿಯ ತೆರೆದರೆ ಬೆಳಗಾಗಿ ಬಂದವರ ಕಾರಣವನರಿದುಣ್ಣಲಾಯಿತ್ತೆ ಗುರುನಿರಂಜನ ಚನ್ನಬಸವಲಿಂಗದಲ್ಲಿ ಬಕಹಂಸ!