ಆದ್ಯರನುಭಾವವನರಿದು ಕಂಡೆನೊಂದು ಮುಖದಲ್ಲಿ,
ವೇದ್ಯರನುಭಾವವನರಿದು ಕಂಡೆನೊಂದು ಮುಖದಲ್ಲಿ,
ಸಾಧ್ಯರನುಭಾವವನರಿದು ಕಂಡೆನೊಂದು ಮುಖದಲ್ಲಿ,
ನೂತನ ಪುರಾತನರು ಕೂಡಿ ನೋತು ಮಾಡಿದನುಭಾವದಲ್ಲಿ
ಪರಮಸುಖಿಯಾಗಿರ್ದೆನು ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Ādyaranubhāvavanaridu kaṇḍenondu mukhadalli,
vēdyaranubhāvavanaridu kaṇḍenondu mukhadalli,
sādhyaranubhāvavanaridu kaṇḍenondu mukhadalli,
nūtana purātanaru kūḍi nōtu māḍidanubhāvadalli
paramasukhiyāgirdenu guruniran̄jana cannabasavaliṅgā.
ಸ್ಥಲ -
ಮಾಹೇಶ್ವರನ ಪ್ರಾಣಲಿಂಗಿಸ್ಥಲ