Index   ವಚನ - 301    Search  
 
ಸಾಧಕಯೋಗದಿಂದ ನಾದಬಿಂದುಕಳೆಯ ಹುಡುಕಿ ಕಂಡು ಕೂಡಬೇಕೆಂಬ ಆಯಾಸಯೋಗಿಗಳನೇನೆಂಬೆನಯ್ಯಾ. ನಾದಬಿಂದುಕಳೆಯೊಳಡಗಿರ್ದ ಮಹಾಪ್ರಕಾಶವ ಗುರುಮುಖದಿಂದೆ ಕರಸ್ಥಲಕ್ಕೆ ತಂದು, ಸತ್ಕ್ರಿಯೆಯಿಂದೆ ಸಮವೇದಿಸಿ ಸರ್ವಾಂಗಲಿಂಗಮಯವಾಗಿ ಸುಖಿಸುವ ಭೇದವನರಿಯದೆ ಬಂದುಹೋದ ಗುರುನಿರಂಜನ ಚನ್ನಬಸವಲಿಂಗಕ್ಕೆ ಭಿನ್ನವಾಗಿ.