Index   ವಚನ - 303    Search  
 
ಗಗನದಾವರೆ ಮೇರುಗಿರಿಪರ್ವತದೊಳೆಸೆವ ಪರಬ್ರಹ್ಮಶಿವನ ಮುಖಮುಖಾಂತರದಿಂ ನೋಡಿ ಕಂಡು ಸುಖಮಯನಾಗಿರಬೇಕಲ್ಲದೆ, ಯುಕುತಿಯಾಯಾಸದಿಂದರಿದು ಕಂಡು ಕೂಡಬೇಕೆಂಬ ಮುಕುತಿಗೇಡಿಗಳಿನ್ನೆಂತು ಪಥವನರಿದಿರುವರಯ್ಯಾ ಗುರುನಿರಂಜನ ಚನ್ನಬಸವಲಿಂಗಾ!