Index   ವಚನ - 316    Search  
 
ಶ್ರದ್ಧೆ ಸಾವಧಾನ ಲಿಂಗಸ್ಥಲವಾಗಿ, ನಿಷ್ಠಾನುಭಾವ ಅಂಗಸ್ಥಲವಾಗಿ, ಸಮರಸಾನಂದ ಕರಸ್ಥಲವಾಗಿ, ಮನದಲ್ಲಿ ಭಕ್ತಿ, ಮನನದಲ್ಲಿ ಜ್ಞಾನ, ಮನನೀಯದಲ್ಲಿ ವೈರಾಗ್ಯಗೂಡಿ ನಡೆವ ಸಚ್ಚಿದಾನಂದಮಾಹೇಶ್ವರನ ಪಾದಕಮಲಕ್ಕೆ ಭೃಂಗನಾಗಿ ನಮೋ ನಮೋ ಎನುತಿರ್ದೆನು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.