•  
  •  
  •  
  •  
Index   ವಚನ - 1261    Search  
 
ಧರೆಯಾಕಾಶವಿಲ್ಲದಂದು, ತ್ರೈಮಂಡಲ ನೆಲೆಗೊಳ್ಳದಂದು, ಹೋಮ ನೇಮ ಜಪ ತಪವಿಲ್ಲದಂದು ನಿಮ್ಮನಾರು ಬಲ್ಲರು? ಹರಿ ಬ್ರಹ್ಮಾದಿಗಳಿಗೆ ಅಗೋಚರ, ನಿರ್ಲೇಪ ನಿರಂಜನನಾಗಿ- ವೇದಂಗಳರಿಯವು, ಶಾಸ್ತ್ರ ಶೃತಿ ಸ್ಮೃತಿಗಳು ನಿಮ್ಮನರಿಯವು. ಗಗನಕಮಲಕುಸುಮ ಪರಿಮಳದಿಂದತ್ತತ್ತಲು ಗುಹೇಶ್ವರಾ ನಿಮ್ಮ ನಿಲವನಾರು ಬಲ್ಲರು?
Transliteration Dhareyākāśavilladandu, traimaṇḍala nelegoḷḷadandu, hōma nēma japa tapavilladandu nim'manāru ballaru? Hari brahmādigaḷige agōcara, nirlēpa niran̄jananāgi- vēdaṅgaḷariyavu, śāstra śr̥ti smr̥tigaḷu nim'manariyavu. Gaganakamalakusuma parimaḷadindattattalu guhēśvarā nim'ma nilavanāru ballaru?
Hindi Translation धरती आकाश न रहते समय, त्रैमंडल स्थिर न रहते समय, होम नेम जप तप न रहते समय तुमको कौन जानते ? हरि ब्र्ह्मादि को अगोचर, निर्लेप निरंजन बने - वेद नहीं जानते, शास्त्र, स्मृति तुम को नहीं जानते - गगन कमल कुसुम परिमल से उधर उधर गुहेश्वरा तुम्हारी स्थिति कौन जानता? Translated by: Eswara Sharma M and Govindarao B N