ಅಲಕ್ಷ ಅನಾಮಯ ಅಖಂಡ ನಿಲವು ಲಕ್ಷಕ್ಕೆ ಬಂದು ನಿಂದಲ್ಲಿ
ನಿರ್ಗಮನ ನಿರ್ಮಾಯ ನಿಸ್ಸೀಮದಿರವು ಸೀಮೆಗೊಂಡಿತ್ತು ನೋಡಾ.
ಕಣ್ಣಿಗೆ ನಿಲಿಕದಾಟ, ಹಣ್ಣಿತು ಮೂರುಲೋಕದೊಳಗೆ
ಒಳಗೊಳಗಿನಾಟ ಬಳಿವಿಡಿದು ಬಂದು
ಉಭಯಕ್ಕಾವರಿಸಿ ಗಮಿಸುವಲ್ಲಿ ಅಂತು ಇಂತುಯೆನಲುಂಟೆ?
ಜಡ ಅಜಡಯೆನಲುಂಟೆ ಜಾತಾದಿ ಸಕಲ ತೃಣಾಗ್ನಿ?
ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಶರಣ
ಅನುಸರಣಿತಮಾದಿತ್ಯ.
Art
Manuscript
Music
Courtesy:
Transliteration
Alakṣa anāmaya akhaṇḍa nilavu lakṣakke bandu nindalli
nirgamana nirmāya nis'sīmadiravu sīmegoṇḍittu nōḍā.
Kaṇṇige nilikadāṭa, haṇṇitu mūrulōkadoḷage
oḷagoḷagināṭa baḷiviḍidu bandu
ubhayakkāvarisi gamisuvalli antu intuyenaluṇṭe?
Jaḍa ajaḍayenaluṇṭe jātādi sakala tr̥ṇāgni?
Guruniran̄jana cannabasavaliṅga nim'ma śaraṇa
anusaraṇitamāditya.
ಸ್ಥಲ -
ಮಾಹೇಶ್ವರನ ಶರಣಸ್ಥಲ