Index   ವಚನ - 330    Search  
 
ಅಖಂಡ ಪ್ರಕಾಶಾಲಯ ಬ್ರಹ್ಮವನರಸಿಕೊಂಡು ಆ ವೀರಸ್ಥಲದಲ್ಲಿ ಧರಿಸಿಪ್ಪ ಅನುಪಮ ವೀರಮಾಹೇಶ್ವರನ ನಡೆಯಲ್ಲಿ ತೋರುವುದು, ನುಡಿಯಲ್ಲಿ ತೋರುವುದು, ಹಿಡಿವಲ್ಲಿ ಕಾಣುವುದು, ಕೊಡುವಲ್ಲಿ ಕಾಂಬುವುದು, ಕೊಂಬಲ್ಲಿ ಕಾಣುವುದು, ಬರುವಲ್ಲಿ ತೋರುವುದು, ಹೋಗುವಲ್ಲಿ ತೋರುವುದು ಗುರುನಿರಂಜನ ಚನ್ನಬಸವಲಿಂಗವು ತಾನೇ ನಿರುತವಾಗಿ.