•  
  •  
  •  
  •  
Index   ವಚನ - 1264    Search  
 
ನಚ್ಚು ಮಚ್ಚಿನ ಸುಖ ಪರಿಣಾಮ ಸನ್ನಿಹಿತವಾದ ಬಳಿಕ, ಇನ್ನು ಅನುಭಾವವೆಂಬುದಿಲ್ಲ-ಅಂತಿರಲಿ ನುಡಿಯ ಗಡಣ. ಶಶಿಧರನಟ್ಟಿದ ಬೆಸನ ಮಾಡಬಂದ ಬಳಿಕ, ಹೇಳಿದ ಮಣಿಹವ ಮಾಡುತ್ತಿಹುದಲ್ಲದೆ ಅದು ತನ್ನಲ್ಲಿ ತಾನು ಬೆರಸುವಂದಿಗೆ ಬೆರಸಲಿ; ಆ ದಿನಕ್ಕೆ ಬಂದು ಹೇಳುವೆವು ನಿರ್ಣಯವ. ಗುಹೇಶ್ವರಲಿಂಗದ ಆಣತಿ ಬಪ್ಪನ್ನಬರ ಶಿವಶರಣರೆಲ್ಲರೂ ಸಂಗನಬಸವಣ್ಣ ಸಹಿತ ನಿತ್ಯರಾಗಿ ಇರಿ.
Transliteration Naccu maccina sukha pariṇāma sannihitavāda baḷika, innu anubhāvavembudilla-antirali nuḍiya gaḍaṇa. Śaśidharanaṭṭida besana māḍabanda baḷika, hēḷida maṇihava māḍuttihudallade adu tannalli tānu berasuvandige berasali; ā dinakke bandu hēḷuvevu nirṇayava. Guhēśvaraliṅgada āṇati bappannabara śivaśaraṇarellarū saṅganabasavaṇṇa sahita nityarāgi iri.
Hindi Translation यकीन प्यार सुख परिणाम सन्निहित होने के बाद, और अनुभाव कहना नहीं- बोली की रीति वैसे रहे, शशिधर भेजा कार्य करआने के बाद कहे सेवा करने के बिना वह अपने में आप मिल ने में मिलादे, उस दिनआकर निर्णय कहेंगे। गुहेश्वर लिंग कीआज्ञा आने तक सब शिवशरण संगनबसवण्णा सहित नित्य बने रहिए। Translated by: Eswara Sharma M and Govindarao B N Translated by: Eswara Sharma M and Govindarao B N