ಮದಮಲದ ಸೋಂಕನಳಿದ ಸದಮಲಪ್ರಸಾದಿ
ಸಾವಧಾನಮುಖಸನ್ನಿಹಿತನಾಗಿ,
ನಡೆನುಡಿಯೊಳೊಪ್ಪಿ ಚರಿಸುವನಲ್ಲದೆ
ಆ ಮದಜಡದೇಹಿಗಳಂತೆ ಅರಿವಿನ ಬೆಳಗು ಮರೆದು
ಮನವರಿದಂತೆ ಕಾಯ ಪ್ರಾಣವ ಕಂಡು ಸುಖಿಸಿಕೊಂಬುವನಲ್ಲ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಅಜಡಾನಂದಮುಖಿ.
Art
Manuscript
Music
Courtesy:
Transliteration
Madamalada sōṅkanaḷida sadamalaprasādi
sāvadhānamukhasannihitanāgi,
naḍenuḍiyoḷoppi carisuvanallade
ā madajaḍadēhigaḷante arivina beḷagu maredu
manavaridante kāya prāṇava kaṇḍu sukhisikombuvanalla
guruniran̄jana cannabasavaliṅgadalli ajaḍānandamukhi.