Index   ವಚನ - 360    Search  
 
ಆಡುವರಯ್ಯಾ ಅಂಗವ ಹೊತ್ತು, ನೋಡುವರಯ್ಯಾ ಕಂಗಳು ಕೆಟ್ಟು, ಬೇಡುವರಯ್ಯಾ ಬಾಯಿಸವಿಗೆ, ಹಾಡುವರಯ್ಯಾ ಅಶನವ ಕಂಡು, ಕೂಡುವರಯ್ಯಾ ಆಡುವ ರಚನೆಗೆ, ಸತ್ತು ಹೋಗುವರಯ್ಯಾ ದುಃಸಂಸಾರದೊಳಗೆ, ಗುರುನಿರಂಜನ ಚನ್ನಬಸವಲಿಂಗಾರ್ಪಿತವನರಿಯದೆ ಬೀಳುವರಯ್ಯಾ ನರಕದೊಳಗೆ.