Index   ವಚನ - 370    Search  
 
ಸತ್ಯವನರಿಯದೆ ಮಿಥ್ಯ ಮಾಯೆಯ ತುತ್ತಿನೊಳಗಿರ್ದು ಅತ್ತಲರಿದರ್ಪಿಸುವೆನೆಂಬ ಅಬದ್ಧ ಮೂಢರಿಗೆ ಅಮಲಪ್ರಸಾದ ಅಳವಡಲರಿಯದು. ಕರ್ಮಕತ್ತಲೆಯ ಕಳೆದು ನಿರ್ಮಲಮಥನದಿಂದೊಗೆದ, ನಿಜಮುಖಸನ್ನಿಹಿತನಾಗಿ, ತ್ರಿವಿಧವನರ್ಪಿಸಿ ಅವಧರಿಸಬಲ್ಲ ಅಪ್ರತಿಮ ಪ್ರಸಾದಿಗಲ್ಲದೆ ಇಲ್ಲ. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಪ್ರಸಾದಿಗೆ ನಮೋ ನಮೋ ಎಂದು ಬದುಕಿದೆನೈ.