Index   ವಚನ - 388    Search  
 
ಭಕ್ತಿವಿಹೀನ ಕಾಯಕ್ಕೆ ಲಾಂಛನವಿರ್ದಡೇನು? ನೆನಹಿಲ್ಲದ ಮನಕ್ಕೆ ವಿನಯನುಡಿ ಘನವಿರ್ದಡೇನು? ಆಪ್ಯಾಯನಕ್ಕರಿಯದ ದ್ರವ್ಯ ಅನಂತವಿರ್ದಡೇನು? ಬೂರದ ತರು, ಸಾರವಿಲ್ಲದ ಸಿಂದಿಯಗಿಡ, ಸೂಳೆ, ಸರ್ಪನ ತೆರ. ಗುರುನಿರಂಜನ ಚನ್ನಬಸವಲಿಂಗದಲ್ಲಿ, ಅಂತಲ್ಲ ನಿಜಭಕ್ತನಿರವು.