ಪ್ರಾಣಲಿಂಗತ್ವ ಲಿಂಗಪ್ರಾಣತ್ವ ಪ್ರಸಾದಮುಕ್ತತ್ವವೆಂಬ
ಅನುವನರಿದ ಅಭಿನ್ನಪ್ರಸಾದಿಗೆ ದ್ವೈತಾದ್ವೈತ ಕಷ್ಟ;
ಭಾವಿಕರು ಕಾರಣದ ಬರವೆಂದು ಕಾಣಲಿಲ್ಲ.
ಅದೇನು ಕಾರಣವೆಂದೊಡೆ:
ಅಜಾತ ಅನುಪಮಾನಂದಪ್ರಕಾಶ
ಗುರುನಿರಂಜನ ಚನ್ನಬಸವಲಿಂಗ
ಪ್ರಾಸದಕ್ಕೆ ಪ್ರಸಾದಿಯಾದ ಕಾರಣ.
Art
Manuscript
Music
Courtesy:
Transliteration
Prāṇaliṅgatva liṅgaprāṇatva prasādamuktatvavemba
anuvanarida abhinnaprasādige dvaitādvaita kaṣṭa;
bhāvikaru kāraṇada baravendu kāṇalilla.
Adēnu kāraṇavendoḍe:
Ajāta anupamānandaprakāśa
guruniran̄jana cannabasavaliṅga
prāsadakke prasādiyāda kāraṇa.
ಸ್ಥಲ -
ಪ್ರಸಾದಿಯ ಪ್ರಾಣಲಿಂಗಿಸ್ಥಲ