Index   ವಚನ - 425    Search  
 
ದಶವಾಯುಗಳ ದೆಸೆಗೆಡಿಸಿ ಮಸಿಯ ಹೆಂಗಳೆಯ ವಿಷಯನುರುಹಿ, ಕಸಮಲವ ಕಳೆದುಳಿದು ಶಶಿಧರನ ವಶಗತ ಮಾಡಿಕೊಂಡಾಚರಿಸುವಲ್ಲಿ ಅನುಪಮ ಕ್ರಿಯಾಜ್ಞಾನಬೆಳಗಿನ ಸುಖವೇದಿಯಾಗಿ ಆದಿ ಮಧ್ಯ ಅವಸಾನದನುವರಿದಿರಬೇಕು. ಅಂಗ ಮನ ಪ್ರಾಣ ಪ್ರಕಾಶಾವಧಾನ ನಿರಂತರ ನಿಜಾನಂದ ನಿಶ್ಚಿಂತನಾಗಿರಬೇಕು. ಗುರುನಿರಂಜನ ಚನ್ನಬಸವಲಿಂಗ ಪ್ರಸಾದಕ್ಕೆ ಪ್ರಸಾದಿಯಾಗಿರಬೇಕು.