Index   ವಚನ - 442    Search  
 
ಹಿಂದುಮುಂದಿನ ಸಂದುಸಂಶಯ ಮುಂದ ತೋರದೆ ತೋರಿ ಸುಖಿಸುವ ಶರಣ. ಬಂದ ಸುಖದುಃಖವ ಹೆಚ್ಚಿ ನೊಂದದ ಸಂದಸುಖಿ ಶರಣ. ಬೆಂದ ಒಡಲಿಗೆ ಹುಸಿದು ಮಸಿಹೂಸಿ ಮರೆದ ಹಸಿವರತು ಕೊಂಬಸುಖಿ ಶರಣ. ಹೊರಗೊಳಗಿನ ನಡೆಯ ಹರಿದು ಹಾರದ ಸುಖಿ ಶರಣ. ಗುರುಲಿಂಗಜಂಗಮಪ್ರಸಾದ ಸಮರಸವರಿದು ಮರೆಯದೆ ಮಾಟಸುಖಿ ಶರಣ. ಗುರುನಿರಂಜನ ಚನ್ನಬಸವಲಿಂಗದಂಗವಾಗಿ ಸುಖವಿತ್ತುಕೊಂಬ ಪ್ರಸಾದಿ ಶರಣ.