ಕತ್ತಲೆ ಬೆಳಗಿನೊಳಿಪ್ಪ ಮಿಥ್ಯಮಾರಿಯ ಮಕ್ಕಳಿಗೆ
ನಿತ್ಯರೆಂಬ ನುಡಿ ಮತ್ತೆಲ್ಲಿಹದೊ?
ಬಗೆ ಬಗೆ ಸೋಗ ತೊಟ್ಟು ನಗುತ್ತಲಳುತ್ತ
ಶರಧಿಯೊಳು ನೀರಾಟವನಾಡುವವರು
ಮಹಾನಂದದಲ್ಲೊಪ್ಪುವ
ಮಹಾಲಿಂಗಪ್ರಸಾದಸುಖವನವರೆತ್ತಬಲ್ಲರು
ಗುರುನಿರಂಜನ ಚನ್ನಬಸವಲಿಂಗಪ್ರಸಾದಿಯೈಕ್ಯರಲ್ಲದೆ.
Art
Manuscript
Music
Courtesy:
Transliteration
Kattale beḷaginoḷippa mithyamāriya makkaḷige
nityaremba nuḍi mattellihado?
Bage bage sōga toṭṭu naguttalaḷutta
śaradhiyoḷu nīrāṭavanāḍuvavaru
mahānandadalloppuva
mahāliṅgaprasādasukhavanavarettaballaru
guruniran̄jana cannabasavaliṅgaprasādiyaikyarallade.