Index   ವಚನ - 500    Search  
 
ತನ್ನ ಕಾರ್ಯಕ್ಕಾಸ್ಪದ ಕಳೆಯಳಿಯದ ಮುನ್ನ ಕಂಡು ಕಾಣಿಸಿದ ಸುಳುಹ, ಸುಳುಹಿಡಿದಮೇಲೆ ಬಳಿವಿಡಿದು ಬಂದು ತೋರಿಕೊಟ್ಟನು. ಮೂರಾರು ಕೋಟಿ ಸೋಮಸೂರ್ಯರೊಂದಾದ ಮಹಾಪ್ರಕಾಶವು ಎನ್ನ ಕಂಗಳಮುಂದೆ, ಕಂಗಳ ಮುಂದಿನ ಬೆಳಗು ಕಾಯವನುಂಗಿ, ಕರಣವನುಂಗಿ, ಪ್ರಾಣವನುಂಗಿ ಭಾವಬಿಚ್ಚಿ ಮಹಾನುಭಾವ ಗುರುನಿರಂಜನ ಚನ್ನಬಸವಲಿಂಗ ತಾನಾದುದು.