Index   ವಚನ - 502    Search  
 
ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅಖಂಡಮಯ ಪರಶಿವನ ಕಿಂಚಿತ್‍ಗತಿಮತಿಗಳು, ಸಂಚಿತಾದಿ ಸಂಬಂಧಕರ್ಮವಿಡಿದ ಮನಭಾವದಿಂದೆ ಕಂಡರಿದೆವೆಂದು ಹೇಳುವ ಕಲ್ಪಿತವಂತಿರಲಿ, ಕಂಗಳಮುಂದೆ ಮಂಗಳಮಯವಾಗಿ ಮೂರ್ತಿಗೊಂಡಿಪ್ಪ ಲಿಂಗವನಂಗಮನಪ್ರಾಣವಾಗಿ ಭಾವಬೆರೆಸಿ ಮಹಾನುಭಾವವಾದ ಮಹಾಮಹಿಮನೆ ಪ್ರಾಣಲಿಂಗಿ, ಉಳಿದವರೆಲ್ಲ ಅಧಮರು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.