Index   ವಚನ - 505    Search  
 
ಉರಿಯ ಸೀರೆಯನುಟ್ಟ ವನಿತೆಯರ ಶರಗ ಹಿಡಿದುಬರುವವರಾರೊ! ಹಾವಿನ ಹೆಡೆಯ ನೆಗಹಿ ಕಾಲಕುಣಿಸುತ ಬರುವವರಾರೊ! ತಲೆಯೊಳಗೆ ಕಾಲುಮಡಗಿ ಕಾಲೊಳಗೆ ತಲೆಯ ಮಡಗಿ ಗಗನದುರಿಯ ಹೊಗುವರಾರೊ! ಕೆಳಗಣ ಮೂರುಮನೆಯ ದೀಪವ ತಂದು ಮೇಗಣ ಮನೆಗೆ ಬಂದವರಾರೊ! ಗುರುನಿರಂಜನ ಚನ್ನಬಸವಲಿಂಗಕ್ಕಂಗವಾದ ಪ್ರಾಣಲಿಂಗಿಯೆಂಬೆ ಕಾಣೊ.