Index   ವಚನ - 517    Search  
 
ಅನುಭಾವಿಯಾದ ಅಪ್ರತಿಮಶರಣಂಗೆ ಖಂಡಿತಕರ್ಮಂಗಳೆಲ್ಲ ಭಕ್ತಿಯೊಡನೈದಿ ಜ್ಞಾನಲಿಂಗಸನ್ನಿಹಿತವಾಗಿ ಒಪ್ಪುತಿರ್ದವು ನೋಡಾ. ಛಲ ನಿಯಮ ವ್ರತಂಗಳೆಲ್ಲ ಭಕ್ತಿ ಪ್ರಕಾಶದೊಡನೈದಿ ಜ್ಞಾನಲಿಂಗಾಭರಣವಾಗಿ ತೋರುತಿರ್ದವು ನೋಡಾ. ಸಕಲ ಸಂಭ್ರಮಂಗಳೆಲ್ಲ ಭಕ್ತಿಗೂಡಿ ಸುಜ್ಞಾನಪ್ರಭೆಯನೈದಿ ಗುರುನಿರಂಜನ ಚನ್ನಬಸವಲಿಂಗಾರ್ಚನೆಯ ಸೊಬಗಿನ ಸುಖದೊಳೋಲಾಡುತಿರ್ದವು ನೋಡಾ.