ಆದ್ಯರವಚನ ಸಾಧ್ಯವಾಯಿತೆಂದು
ಮದ್ದ ತಿಂದು ಕುಳಿತ ಮನುಜನಂತೆ,
ಇರುಳುಗಳೆದ ಗೂಗೆಯಂತೆ,
ಮೂಲಿ ಗೊಂದಿ ಗುಡ್ಡ ಗುಹ್ಯಂಗಳ ಸೇರಿ
ಮದಡು ತಿಳಿದು ಹಗಲುಗಳೆದು ಉದರ ಬಗೆವಂತೆ,
ದುರ್ವೈರಾಗ್ಯವುಳಿದು, ಮೊದಲ ಸಂದು ಮುಂದೆ ಹೋಗುವ
ತುಡುಗುಣಿ ಗುಹ್ಯವಾದನುಭಾವದ ಕುರುಹನವನೆತ್ತಬಲ್ಲನಯ್ಯಾ
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Ādyaravacana sādhyavāyitendu
madda tindu kuḷita manujanante,
iruḷugaḷeda gūgeyante,
mūli gondi guḍḍa guhyaṅgaḷa sēri
madaḍu tiḷidu hagalugaḷedu udara bagevante,
durvairāgyavuḷidu, modala sandu munde hōguva
tuḍuguṇi guhyavādanubhāvada kuruhanavanettaballanayyā
guruniran̄jana cannabasavaliṅgā.
ಸ್ಥಲ -
ಪ್ರಾಣಲಿಂಗಿಯ ಮಾಹೇಶ್ವರಸ್ಥಲ