Index   ವಚನ - 532    Search  
 
ಉರಿಯೊಳು ಮುಳುಗಿದ ತಾವರೆಯ ಕುಸುಮವ ತಂದು ಮೂಸಿದರೆ ಸದ್ವಾಸನೆಯ ತೋರಲರಿಯದು. ಗುರೂಪದೇಶವಾದ ಹೃದಯಕಮಲವನು ತಾಪತ್ರಯ ಉರಿಯೊಳು ಹಾಕಿದಾತನ ಹೃದಯದಲ್ಲಿ, ನಿಜಾನುಭಾವದ ವಾಸನೆ ಶಿವಶರಣರಿಗೆ ತೋರಲರಿಯದು ಗುರುನಿರಂಜನ ಚನ್ನಬಸವಲಿಂಗಕ್ಕೆ ಅಯೋಗ್ಯ ಕಾಣಾ.