ಭೂಮಿಯ ನೆಳಲಲ್ಲಿ ಉಂಬುತ ತಾಯ ಬೆಳಗಿನಲ್ಲಿರ್ದು
ಮೂರು ಬಣ್ಣದ ಗಿರಿಯನೇರಿ,
ಮೂರೈದು ಗತಿಯಿಂದೆ ಉರಿಯಮಂದಿರದೊಳಗಿರ್ಪ
ಬಯಲಶೃಂಗಾರವ ಕಾಣಬಹುದೆ?
ಭೂಮಿಯ ನೆಳಲ ಸುಟ್ಟು, ಊಟವ ಮೀರಿ, ತಾಯ ಕೊಂದು,
ಬೆಳಗನುರುಹಿ, ಗಿರಿಯಬಣ್ಣವ ಕಳೆದು,
ಮೇಲಕ್ಕೆ ನೋಡಿ ನಿಂದಲ್ಲಿ ಬಿಳಿಯ ಕುರುಹ ಕಂಡುಕೊಂಡು
ಮೂರೈದು ಗತಿಯನರಿದು, ಎರಡು ಕಾಣದೆ ನಡೆದು ನಿಂದಲ್ಲಿ
ಉರಿಯಮಂದಿರದೊಳಗಿರ್ಪ
ಬಯಲಶೃಂಗಾರವ ಕಾಣಬಹುದು
ಗುರುನಿರಂಜನ ಚನ್ನಬಸವಲಿಂಗದಲ್ಲಿ.